ರವಿವಾರ ೩ ಆಗಸ್ಟ್ ೨೦೦೮

ಸ್ನೇಹ..


(ಸ್ನೇಹಿತರ ದಿನದ ಶುಭ ಸೂಚಕವಾಗಿ ಬರೆದ ಕವನ )

ಸ್ನೇಹ.. ಸ್ನೇಹ.. ಸ್ನೇಹ.. ಸ್ನೇಹ│
ಬಾಳ ಪಯಣದ ಗೀತೆಗೆ ಅದುವೇ ಗೇಯ│
ಗೆಳೆಯ ಗೆಳತಿಯರ ಅಕ್ಕರೆಯ ಗೆಳೆತನ│
ಬಾಳಲಿ ನಾವ್ ಪಡೆಕೊಂಡ ನಿಜ ಸಿರಿತನ│

ಜಗದಣ್ಣ ಕನಸಲಿ ಬಂದು ಹೇಳಿದ ಒಂದು ನೀತಿ│
ನಲ್ಲ ನಲ್ಲೆಯರಲಿ ಇರುವುದು ಆಗಸದೆತ್ತರದ ಪ್ರೀತಿ
ಎಂದಾದರೊಂದು ದಿನ ಅದು ಮುಗಿಯುವ ಭೀತಿ│
ಸ್ನೇಹದಲ್ಲಿ ಇರುವುದು ಎಂದೂ ತೀರದ ಪ್ರೀತಿ│

ಬಂಧು ಬಳಗ ಬಾಂಧವ್ಯವೊಂದು ಅವಿಭಾಜ್ಯ ಬಂಧನ│
ಅದರ ನಡುವೆ ಗೆಳೆತನವೊಂದು ನೆಮ್ಮದಿಯ ಸ್ಪಂದನ│
-ನಿಮ್ಮ ಸುನಿಲ್ ಮಲ್ಲೇನಹಳ್ಳಿ

(ಪದಗಳ ಅರ್ಥ
ಗೇಯ =ಸಂಗೀತ , ಅವಿಭಾಜ್ಯ= ಬಿಡಿಸಲಾಗದ , ಜಗದಣ್ಣ= ಶಿವ, ಈಶ್ವರ)

4 comments:

ಶ್ರೀವತ್ಸ ಜೋಶಿ ಹೇಳಿದರು...

ಸುನೀಲ್,
ಒಳ್ಳೆಯ ಕವನ ಬರೆದದ್ದಕ್ಕಾಗಿ ಅಭಿನಂದನೆ ಮತ್ತು ಮುಂದೆ ಇದೇರೀತಿ, ಇನ್ನೂ ಒಳ್ಳೆಯ ಕೃತಿರಚನೆಗೆ ಶುಭಾಶಯಗಳು.

ಒಂದು ತಿದ್ದುಪಡಿ. ’ಗೇಹ’ ಎಂದರೆ ಸಂಗೀತ ಅಲ್ಲ, ಗೇಹ ಎಂದರೆ ವಾಸಸ್ಥಳ/ಮನೆ (ಗೃಹ ಎಂಬ ಪದದ ತದ್ಭವ). ಗೇಯ ಎಂದರೆ ಹಾಡಬಹುದಾದ/ಹಾಡತಕ್ಕ ಎಂಬ ಅರ್ಥ ಬರುತ್ತದೆ.

Kavitha ಹೇಳಿದರು...

good one, common aagide, vishesha enoo illa. snehada mele bahalashtu kanvanagalu already irodrinda.

ತೇಜಸ್ವಿನಿ ಹೆಗಡೆ- ಹೇಳಿದರು...

ಕವನದೊಳಗಿನ ಭಾವಾರ್ಥ ಇಷ್ಟವಾಯಿತು. ಹಾಡಿಕೊಳ್ಳುವಂತೆಯೂ ಇದೆ. ಬರೆಯುತ್ತಿರಿ.

Shobha ಹೇಳಿದರು...

chennagide