ಬುಧವಾರ ೧೭ ಡಿಸೆಂಬರ್ ೨೦೦೮

ಓ ಮೌನವೇ ನೀ ಮಾತಾಡು│


ಓ ಮೌನವೇ ನೀ ಮಾತಾಡು│
ಓ ಮೌನವೇ ನೀ ಮಾತಾಡು│
ಹೊಳಪು ತುಂಬಿದ ಕಣ್ಣಲೇ
ನೀ ನನ್ನ ಕೊಲ್ಲುವುದ ಸಾಕು ಮಾಡು│
ಓ ಮೌನವೇ ನೀ ಮಾತಾಡು│

ತೆರೆದು ನಿನ್ನ ತುಟಿಯಂಚು│
ಮಾತಾಗಲಿ ನಿನ್ನ ಮೌನ│ಹಾಡಾಗಲಿ ನಿನ್ನ ಮಾತು│
ಆ ಹಾಡಲಿ ನನ್ನೆಡೆಗೆ ಒಲವಿನ ಭಾವ ಇರಲಿ│
ಪ್ರೀತಿ ಪ್ರಣಯದ ರಾಗವಿರಲಿ│
ಎಲ್ಲರೆದುರು ಆ ಹಾಡ ಗೆಳತಿ ಮನಬಿಚ್ಚಿ ನೀ ಹಾಡು│
ಕೇಳಿ ಆ ನಿನ್ನ ಹಾಡು ಮೆಚ್ಚಲಿ ನಾಡು│
ನನ್ನೆದೆಯ ಮರುಭೂಮಿಯಾಗಲಿ ಹಸಿರು ಕಾಡು│

ಓ ಗೆಳತಿ ಹೇಳು.. ಗುಟ್ಟಾಗಿ ನನಗೆ ಹೇಳು
ಎಂದು ತೊರೆಯುವೆ ಆ ನಿನ್ನ ಮೌನ?
ಎಂದು ಹಾಡಾಗುವುದು ಆ ನಿನ್ನ ಮಾತು?
ಇದನು ನೀ ಹೇಳುವವರೆಗೂ ನೆಮ್ಮದಿಯಾಗಿ
ನಿದ್ರಿಸೆನು ನಾನಂತು!
(ಚಿತ್ರಕೃಪೆ www.canvaspaintingindia.com)

4 comments:

Kavitha ಹೇಳಿದರು...

ನಿಮ್ಮ ಕನಸಿನ ಹುಡುಗಿ ಚೆನ್ನಾಗಿದ್ದಾಳೆ. ಅವಳು ಮೌನ ಮುರಿದು ನಿಮ್ಮೆದುರು ಬಂದಾಗ ನನಗೆ ಹೇಳುವುದನ್ನು ಮರೆಯಬೇಡಿ

Naveen ಹೇಳಿದರು...

Super maga, halaya nenapugalu mathe nan Edurale sulidadidavu.

ಚರಿತಾ ಹೇಳಿದರು...

ಚೆನ್ನಾಗಿದೆ.
ಬರಿತಾ ಇರಿ.

technology ಹೇಳಿದರು...

I will pass on your article introduced to my other friends, because really good!
wholesale jewelry