ನನ್ನ ಬಗ್ಗೆ ಹೇಳುವುದು ಬಹಳಷ್ಟು ಇದೇ. ಅದನ್ನೆಲಾ ಹೇಳುವುದಕ್ಕೆ ಆಗದೆ ಇರುವುದಕ್ಕೆ ಕಾವ್ಯ, ಕಥನಗಳ ಲೋಕಕ್ಕೆ ಕಾಲಿರಿಸಿದ್ದು.
ಇಲ್ಲಿ ನಾನು ಏನು ಬರೆದರೂ ಅದನ್ನು ಒಡಲಾಳದಿಂದ ಬರೆದಿರುತ್ತೇನೆ.ನನ್ನ ಮನದ ಭಾವ ಸಾಗರವನ್ನು ಇಲ್ಲಿ ಕಟ್ಟಿಯಾಕುವ ಪ್ರಯತ್ನ ಮಾಡುತ್ತಲೇ ಬಂದಿದ್ದೇನೆ.ನೀವುಗಳು ಇಲ್ಲಿಗೆ ಬಂದು ನನ್ನ ಮನದ ಭಾವ ಧಾರೆಯ ಸವಿಯನ್ನು ಅದು ಸಿಹಿಯೋ ಇಲ್ಲ ಕಹಿಯೋ ತಪ್ಪದೆ ಸವಿದು ಹೋಗಿರಿ.
ಸಧ್ಯಕ್ಕೆ ಬೆಂಗಳೂರಿನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕನ್ನಡದ ಹಿರಿಯ ಸಾಹಿತಿಗಳಾದ ಕಾರಂತರು, ತ.ರಾ.ಸು, ದ.ರಾ. ಬೇಂದ್ರೆ, ಎಸ್. ಎಲ್. ಭೈರಪ್ಪ ಇನ್ನೂ ಮುಂತಾದವರ ಕಾದಂಬರಿ,ಕವನ ಸಂಕಲನಗಳನ್ನು ಓದ್ತಾ ಇರ್ತಿನಿ.ಜೈ ಕರ್ನಾಟಕ ಮಾತೆ
0 comments:
ಒಂದು ಕಮೆಂಟನ್ನು ಪೋಸ್ಟ್ ಮಾಡಿ