ಭಾನುವಾರ, ಫೆಬ್ರವರಿ 1, 2009

ಬಂದಿದೆ ಬಂದಿದೆ ಬಂದಿದೆ│ಪ್ರಬಲ ಆರ್ಥಿಕ ಹಿಂಜರಿತ│




ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
Americaದಲಿ Europeನಲಿ
Indiaದಲಿ, ಎಲೆಡೆಯಲಿ
ಆಗುತಿದೆ ಆಗುತಿದೆ ಆಗುತಿದೆ
ಷೇರು ಸೂಚ್ಯಂಕದಲ್ಲಿ ಇಳಿತ│
ಕೆಲಸಗಳ ಹಿಗ್ಗ ಮುಗ್ಗಾ ಕಡಿತ!

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
ಈಗೀಗ ಆಗಿದೆ ಆಗಿದೆ ತಣ್ಣಗಾಗಿದೆ
Party, Outingಗಳ ಮೊರೆತ│
Bar-Pubಗಳಲಿ ಅಬ್ಬರದ ಕುಣಿತ!

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
Career Lifeನಲಿ ಆಗುವ ಅನಾಹುತಕ್ಕೆ
ಯಾರನೂ ಮಾಡಲಾಗದು ದೂಷಣೆ│
ಆದರೂ ನಾಜೂಕಾಗಿ ಮಾಡಿಕೊಳ್ಳಬೇಕಿದೆ
ನಮ್ಮ ನಮ್ಮ ಕೆಲಸಗಳನು ರಕ್ಷಣೆ!

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
ನಮ್ಮ ನಮ್ಮಯ ದುಂದು ವೆಚ್ಚಕ್ಕೆ
ಇಂದೇ ನಾವ್ ಹಾಕೋಣ ಕಡಿವಾಣ!
ಕಾಯಕ ಕೈ ತಪ್ಪಿ ಹೋದವರಿಗೆ
ನುಗ್ಗಿ ಮುಂದೇ ಹೇಳೋಣ ಸಮಾಧಾನ

ಬಂದಿದೆ ಬಂದಿದೆ ಬಂದಿದೆ│ ಪ್ರಬಲ ಆರ್ಥಿಕ ಹಿಂಜರಿತ│
ಅವರಿಗಾದರೇನು? ನಮಗಾದರೇನು? ಯಾರಿಗಾದರೇನು?
ಎಲ್ಲರ ಸಂಕಷ್ಟದಲ್ಲಿ ಸ್ವಲ್ಪವಾದರೂ ಸಹಭಾಗಿಯಾಗೋಣ
ಕಾಲಕ್ರಮೇಣ ಆರ್ಥಿಕ ಹಿಂಜರಿತವನು ಹಿಮ್ಮೆಟ್ಟಿಸೋಣ!

ರಚನೆ ಸುನಿಲ್ ಮಲ್ಲೇನಹಳ್ಳಿ

12 ಕಾಮೆಂಟ್‌ಗಳು:

shivu.k ಹೇಳಿದರು...

ಸುನಿಲ್,

ಅರ್ಥಿಕ ಮುಗ್ಗಟ್ಟಿನ ಬಗ್ಗೆ ಮತ್ತು ಅದರಿಂದ ತೊಂದರೆಗೊಳಗಾದವರ ಬಗ್ಗೆ ಕವನದಲ್ಲಿ ಕಾಳಜಿ ಇದೆ....

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಸುನಿಲ್,
ಸಮಯೋಚಿತ ಕವನ, ಈಗ ಆರ್ಥಿಕ ಹಿಂಜರಿತ ಎಲ್ಲರನ್ನು ತೀವ್ರವಾಗಿ ಕಾಡುತ್ತಿದೆ. ಸರಿ, ಬನ್ನಿ ಎಲ್ಲರು ಸೇರಿ ಎದುರಿಸೋಣ, ಮತ್ತು ಗುರಿ ತಲುಪೋಣ, ನೀವೇನಂತೀರಾ?
-ರಾಜೇಶ್ ಮಂಜುನಾಥ್

ತೇಜಸ್ವಿನಿ ಹೆಗಡೆ ಹೇಳಿದರು...

ಪ್ರಸ್ತುತ ಸಮಸ್ಯೆಗೆ ಕನ್ನಡಿ ಹಿಡಿವಂತಿದೆ ಕವನ. ಮೊದಲ ಎರಡು ಚರಣಗಳು ಚೆನ್ನಾಗಿವೆ. ಕೊನೆಯ ಸಾಲುಗಳು ಕೊಂಚ ವಾಚ್ಯವೆನಿಸುತ್ತವೆ. ಉತ್ತಮ ಪ್ರಯತ್ನ. ಇನ್ನಷ್ಟು ಕವನಗಳು ಹೊರಬರಲಿ.

ವಿನುತ ಹೇಳಿದರು...

ಉತ್ತಮ ಪ್ರಯತ್ನ. ಸಮಸ್ಯೆ-ಪರಿಣಾಮ-ಪರಿಹಾರ, ಕವನದ ಹರಿವು ಚೆನ್ನಾಗಿದೆ.

manjunath Shanubhoganahalli ಹೇಳಿದರು...

sakath alli ri!,

ಅನಾಮಧೇಯ ಹೇಳಿದರು...

Sooper ! keep it up

Ittigecement ಹೇಳಿದರು...

sunil...
kavana tuMbaa ishta vaayitu...

bhavane chennaagide..

abhinandanegaLu...

ಅನಿಲ್ ರಮೇಶ್ ಹೇಳಿದರು...

ಸುನಿಲ್,

ಈಗಿನ ಪರಿಸ್ಥಿತಿಗೆ ತಕ್ಕಹಾಗಿದೆ.
ಚೆನ್ನಾಗಿದೆ.

ಈಗಿನ ಕಾಲಕ್ಕೆ ತಕ್ಕ ಕವನ.

-ಸ್ವಾಮಿ ಶರಣಂ.

Unknown ಹೇಳಿದರು...

ee kavana.. tells about reality...
Good one... keep it up..

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಸುನಿಲ್,
ಖರ್ಚನ್ನು ಕಡಿಮೆಗೊಳಿಸೋಣ, ಹೆಚ್ಚು ಕಷ್ಟಪಡೋಣ...
ನಿಮ್ಮ ಕಳಕಳಿಗೆ ನನ್ನ ಸಹಮತವಿದೆ.

ಅಂತರ್ವಾಣಿ ಹೇಳಿದರು...

ಸುನಿಲ್,

ಈಗಿನ ಸ್ಠಿತಿಯನ್ನು ಕವನದಲ್ಲಿ ಅಚ್ಚು ಕಟ್ಟಾಗಿ ಹೇಳಿದ್ದೀರ.

ಅನಾಮಧೇಯ ಹೇಳಿದರು...

olleya prayathna Sunil...doni sagali munde hogali ...nimma prythnadha doni sada sihi neeralli hariyai..