ಹೊಸ ವರುಷಕ್ಕೆರಡು ಕವನಗಳು, ಕವನ ೧
ಈ ಹೊಸದಾದ ವರುಷ│ ಪ್ರತಿ ಕ್ಷಣ ಪ್ರತಿ ನಿಮಿಷ│
ಎಲ್ಲರ ಬಾಳಲಿ ತರಲಿ ತುಂಬು ಹರುಷ│
ಈ ದಿನದಿಂದ│ ಈ ಕ್ಷಣದಿಂದ│
ಮುಖದಲಿ ಸದಾ ಬೀರುತಾ ಸಂತಸ│
ಬದುಕಲಿ ಸದಾ ತೋರುತಾ ಸೊಗಸ│
ಇರುವೆಡೆಯೆಲ್ಲ ನಾವ್ ಹಂಚುತಾ ಉಲ್ಲಾಸ│
ಧರೆಯ ಆಗಿಸೋಣ ನವಿರು ಕಳೆಯ ನಿವಾಸ│
ಅದ ನೋಡಿ ಬೆಕ್ಕಸ ಬೆರಗು ಆಗಲಿ ಆ ಕೈಲಾಸ!
ಹೀಗೆ ಮೂಡಿಬಂದ ಮುಗುಳ್ನಗೆ│
ನಾಂದಿಯಾಗಲಿ ಹೊಸ ಬಗೆಯ ಗೆಲುವಿಗೆ│
ಔಷದವಾಗಲಿ ಒಳಮನದ ನೋವಿಗೆ│
ಅರಳಿಸಲಿ ಹೊಸಬಯಕೆಗಳ ಮಲ್ಲಿಗೆ│
-ನಿಮ್ಮ ಸುನಿಲ್ ಮಲ್ಲೇನಹಳ್ಳಿ
(ಚಿತ್ರಕೃಪೆ http://www.shubhashaya.com)
6 ಕಾಮೆಂಟ್‌ಗಳು:
ಸುನಿಲ್,
ನಿಮ್ಮ ಕವನ ಚೆನ್ನಾಗಿದೆ....ಹೀಗೆ ಬರೆಯುತ್ತಿರಿ...
ನಿಮಗೆ ಹೊಸ ವರುಷದ ಶುಭಾಶಯಗಳು.....
ನನ್ನ ಬ್ಲಾಗಿನ ಕಡೆಗೊಮ್ಮೆ ಬನ್ನಿ. ಅಲ್ಲಿ ನಿಮಗಿಷ್ಟವಾಗುವ ಫೋಟೊಗಳು ಮತ್ತು ಲೇಖನಗಳಿರಬಹುದು....
http://chaayakannadi.blogspot.com/
ಸುನಿಲ್,
ನಿಮ್ಮ ಕವನಗಳು ಚೆನ್ನಾಗಿವೆ.
ಹೊಸ ವರ್ಷದ ಸವಿ ಹಾರೈಕೆಗಳು.
ಅಂದಹಾಗೆ,
ನನ್ನ ಬ್ಲಾಗಿಗೆ ಭೇಟಿ ಕೊಡಿ.
http://anil-ramesh.blogspot.com
ಚಂದವಾದ ..ಸರಳವಾದ ಭಾಷೆಯಲ್ಲಿ..
ಭಾವಗಳನ್ನು ಬಿಂಬಿಸಿದ್ದೀರಿ...
ಅಭಿನಂದನೆಗಳು...
ಸುನಿಲ್,
ಕವನ ಚೆನ್ನಾಗಿದೆ, ನಿಮಗೂ ಹೊಸ ವರುಷದ ಹಾರ್ಧಿಕ ಶುಭಾಶಯಗಳು.
-ರಾಜೇಶ್ ಮಂಜುನಾಥ್
ನಿಮಗೂ ಶುಭ ಹಾರೈಕೆಗಳು ಸುನಿಲ್
Nimma Kavanagalalli bhavanegalige jeeva tumbuva adbhutha kale nimagide nimage shubhashayagalu
ಕಾಮೆಂಟ್ ಪೋಸ್ಟ್ ಮಾಡಿ