ಅಬ್ಬಾ! ಭಾರತದಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?
(ಮುಂಬಯಿ ನಗರಿಯಲ್ಲಿ ನವೆಂಬರ್ 26, 2008 ರಂದು ಉಗ್ರಗಾಮಿಗಳಿಂದ ನೆಡೆದ ದುಷ್ಕೃತ್ಯದಲ್ಲಿ ಅಸುನೀಗಿದ ನಮ್ಮ ವೀರಯೋಧರಿಗೆ, ಅಮಾಯಕ ನಾಗರೀಕರಿಗೆ ನಾ ಬರೆದ ಈ ಲೇಖನ ಹಾಗೂ ಕವನ ಹೃದಯಪೂರ್ವಕವಾಗಿ ಅರ್ಪಣೆ -ನಿಮ್ಮ ಸುನಿಲ್ ಮಲ್ಲೇನಹಳ್ಳಿ). ಒಮ್ಮೆ ಓದಲು ಮರೆಯದಿರಿ.
ನಾನು ನಾಲ್ಕನೇ ತರಗತಿ ಓದುತ್ತಿರುವಾಗಿನಿಂದಲೇ ನಮ್ಮೂರಲ್ಲಿ ತರಿಸುತ್ತಿದ್ದ ಪ್ರಜಾವಾಣಿ ದಿನಪತ್ರಿಕೆಯನ್ನು ಪ್ರತಿನಿತ್ಯ ತಪ್ಪಿಸದೆ ಓದುತ್ತಿದೆ. ಆಗ ಪತ್ರಿಕೆಯ ಮುಖಪುಟದಲ್ಲಿ ಬರುತ್ತಿದ್ದ ಪ್ರಮುಖ ವಿಷಯಗಳಾದ, ಶ್ರೀಲಂಕಾದಲ್ಲಿ ಎಲ್.ಟಿ.ಟಿ.ಇ ಹಾಗೂ ಸೇನೆ ನಡುವೆ ಭೀಕರ ಕದನ ಇನ್ನೂರಕ್ಕು ಹೆಚ್ಚು ಸಾವು, ಪಾಕಿಸ್ತಾನದಲ್ಲಿ ಭೀಕರ ಬಾಂಬ್ ಸ್ಫೋಟ ನೂರ ಜನರ ಸಾವು ಈ ರೀತಿಯ ಇನ್ನೂ ಹತ್ತು ಹಲವಾರು ವಿಷಯಗಳನ್ನು ಓದಿದ ಆ ಕ್ಷಣದಲ್ಲಿ “ಅಬ್ಬಾ! ಆ ದೇಶಗಳಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?” ಎನ್ನುವ ಭಯ ಆವರಿಸಿದ ಚಿಂತನೆಯಲ್ಲಿ ನಾನು ಮುಳುಗಿಬಿಡುತ್ತಿದ್ದೆ.
ಆದರೆ ಮೊನ್ನೆ ಅಂದರೆ ನವೆಂಬರ್-26 ರಂದು ಮುಂಬಯಿ ಮಹಾನಗರಿಯಲ್ಲಿ ಉಗ್ರರಿಂದ ನೆಡೆಯಲ್ಪಟ್ಟ ರಕ್ತಸಿಕ್ತ ಕೃತ್ಯಕ್ಕೆ ಬರಿ ಭಾರತ ದೇಶವಲ್ಲದೆ ಇಡಿ ಮನುಕುಲ ಜಗತ್ತೆ ಮಮ್ಮಲು ಮರುಗಿತು. ಈವರೆಗೆ ವಿಶ್ವದಲ್ಲಿ ನೆಡೆದು ಹೋಗಿರುವ ಸಾವಿರಾರು ಮಾನವೀಯತೆಗೆ ಕಳಂಕ ತಂದಿರುವ ಘಟನೆಗಳ ಸಾಲಿಗೆ ನವೆಂಬರ್ 26ರ ಘಟನೆಯೂ ಸೇರಿ ಹೋಯಿತು.
ಈವೊಂದು ಸಂದರ್ಭದಲ್ಲಿ ವಿಶ್ವದ ಇನ್ನಿತರ ದೇಶಗಳ ಜನರುಗಳು, “ಅಬ್ಬಾ ಭಾರತದಲ್ಲಿ ಜನ ಅದು ಹೇಗೆ ವಾಸ ಮಾಡುತ್ತಾರೆ?” ಎಂದು ನಾನು ಚಿಕ್ಕಂದಿನಲ್ಲಿ ಶ್ರೀಲಂಕಾ, ಪಾಕಿಸ್ತಾನಗಳ ಜನರ ಬಗ್ಗೆ ಯೋಚಿಸಿದ ರೀತಿ ಈಗ ಅವರುಗಳು ನಮ್ಮ ಭಾರತದ ಜನರ ಕುರಿತು ಯೋಚಿಸುತ್ತಿರುತ್ತಾರೆ.
ನಮ್ಮ ದೇಶ 1947ರಲ್ಲಿ ಸ್ವಾತಂತ್ರಗಳಿಸಿಕೊಂಡ ನಂತರದಿಂದ ಕಾಶ್ಮೀರದಲ್ಲಿ ಆಗಾಗ ಉಗ್ರರಿಂದ ನೆಡೆಯುತ್ತಿರುವ ಮರಣಹೋಮದ ಘಟನೆಗಳನ್ನು ಬಿಟ್ಟು ಮಿಕ್ಕೆಲ್ಲ ರಾಜ್ಯಗಳಲ್ಲಿ ಉಗ್ರರಿಂದ ಅಂತಹ ಅಘಾತಕಾರಿ ಸನ್ನಿವೇಶಗಳು ನೆಡೆದದ್ದು ಬಲುವಿರಳ. ಆದರೆ 1993ರಲ್ಲಿ ಮುಂಬಯಿಯಲ್ಲಿ ಆದ ಸರಣಿ ಬಾಂಬ್ ಸ್ಫೋಟದ ನಂತರ ದಿನಗಳಲ್ಲಿ ಭಾರತದ ಬಹುತೇಕ ನಗರ ಪ್ರದೇಶಗಳು ಬದುಕಲು ಒಂದು ನೆಮ್ಮದಿಯ ತಾಣವಾಗಿ ಉಳಿದಿವೆಯೇ? ಎನ್ನುವ ಪ್ರಶ್ನೆಗೆ, ಇಲ್ಲ ಎನ್ನುವುದೊಂದೆ ಇರುವ ಪ್ರಮಾಣಿಕ ಉತ್ತರ. ಕನಿಷ್ಟ ಪಕ್ಷ ವರುಷಕ್ಕೆ ಮೂರು-ನಾಲ್ಕು ಹೃದಯ ವಿದ್ರಾವಕ ಘಟನೆಗಳು ಉಗ್ರರಿಂದ ಮುಂಬಯಿ, ದೆಹಲಿ, ಬೆಂಗಳೂರು ಅಹಮದಬಾದ್‌ಗಳಂತಹ ನಗರಗಳಲ್ಲಿ ನೆಡೆಯುತ್ತಲೇ ಇರುತ್ತವೆ.
ಇದಕ್ಕೆ ಪೂರಕವಾಗಿ 2007-2008ರಲ್ಲಿ ಭಾರತದಲ್ಲಿ ನೆಡೆದಿರುವ ಮಾರಕ ಘಟನೆಗಳು ಒಂದಾ-ಎರಡಾ? ದೆಹಲಿಯಲ್ಲಿ ಬಾಂಬ್ ಸ್ಪೋಟ ಐವತ್ತಕ್ಕೂ ಹೆಚ್ಚು ಸಾವು, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಮೇಲೆ ದಾಳಿ, ಮತ್ತೆ ಅದೇ ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಪೋಟ, ಅಹಮದಬಾದ್‌ನಲ್ಲಿ ಬಾಂಬ್ ಸ್ಪೋಟ, ಮತಾಂತರದ ಗಲಭೆ, ನಕ್ಸಲರ ಗಲಭೆ, ಕಾಶ್ಮೀರದಲ್ಲಂತೂ ನಮಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ಅಮಾಯಕ ಜನರ ಮರಣಹೋಮ ನೆಡೆಯುತ್ತಲೇ ಇರುತ್ತದೆ.. ಈಗ ಮುಂಬಯಿಯಲ್ಲಿ 2೦೦ಕ್ಕೂ ಹೆಚ್ಚು ಅಮಾಯಕ ಜನರ ರಕ್ತದೊಕುಳಿ ಹರಿಸಿದ್ದಾರೆ ಉಗ್ರರು..ಹೀಗೆ ಹೇಳುತ್ತಾ ಹೋದರೆ ಇನ್ನೂ ಬಹಳಷ್ಟಿವೆ.
ನಮ್ಮ ಬಡಭಾರತವು ಮೊದಲೇ ಒಂದು ಅಭಿವೃದ್ಧಿಶೀಲ ರಾಷ್ಟ್ರ, ಉಗ್ರಗಾಮಿಗಳು ಹೀಗೆ ಸಾಲು ಸಾಲು ಹೀನಕೃತ್ಯಗಳನ್ನು ನೆಡೆಸುತ್ತಾ ಹೋದರೆ, ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಯಾವ ಅಂತಕ್ಕೆ ಬರಬಹುದು? ನೀವೇ ಯೋಚಿಸಿ? ಮೊನ್ನೆಯ ಘಟನೆಯಲ್ಲಿ ಬರಿ ಹತ್ತು ಜನ ಉಗ್ರರಿಂದ ಉಂಟಾದ ಜೀವ ನಷ್ಟ ಹತ್ತಿರ ಹತ್ತಿರ ಇನ್ನೂರು, ಉಂಟಾದ ಆರ್ಥಿಕ ನಷ್ಟ ಸುಮಾರು ನಾಲ್ಕು ಸಾವಿರ ಕೋಟಿಗಳು. ಅಂದರೆ ಕೇವಲ ಮೂರು ದಿನಗಳಲ್ಲಿ ಆದ ನಷ್ಟ ನಮ್ಮ ದೇಶದ ರಕ್ಷಣಾ ವೆಚ್ಚದ ಹತ್ತನೇಯ ಒಂದು ಪಾಲು (1/1೦).
ನಮ್ಮ ಕೇಂದ್ರ ಹಾಗೂ ನಮ್ಮ ನಮ್ಮ ರಾಜ್ಯ ಸರಕಾರಗಳ ಅಸಡ್ಡೆತನವನ್ನು ಕಂಡು ನಗಬೇಕೋ? ಇಲ್ಲವೇ ಅಳಬೇಕೋ? ಒಂದು ತಿಳಿಯದು. ಇಂತಹ ಈ ಹೇಯ ಘಟನೆಗಳು ನೆಡೆದ ಮುರುಕ್ಷಣದಲ್ಲೇ ಉಗ್ರಗಾಮಿಗಳಿಗೆ ಹಾಗೆ ಮಾಡುತ್ತೇವೆ..ಹೀಗೆ ಮಾಡುತ್ತೇವೆ ಎನ್ನುವ ಪೊಳ್ಳು ಅಶ್ವಾಸನೆಯನ್ನು ನಮ್ಮ ಸರಕಾರ ಕೊಡುವುದು ಸರ್ವೇಸಾಮಾನ್ಯ. ಆದರೆ ಕಾಲಕ್ರಮೇಣ ಇದೇ ಸರಕಾರ ಎಲ್ಲವನ್ನು ಮರೆತು ಸುಮ್ಮನಾಗಿ ಬಿಡುತ್ತದೆ. ಮತ್ತೊಂದು ಇಂತಹ ಅಹಿತಕರ ಘಟನೆ ನೆಡೆದಾಗ ಮತ್ತೆ ಅದೇ ಲೋಕ ಮೆಚ್ಚುವ ಹೇಳಿಕೆಗಳನ್ನು ಕೊಡುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ಉಗ್ರಗಾಮಿಗಳು ನೆಡೆಸುವ ಇಂತಹ ಹೀನ ಕೃತ್ಯಗಳಿಗೆ ನೂರಾರು ಅಮಾಯಕರು ಹಾಗೂ ನಮ್ಮ ಯೋಧರು ಬಲಿಯಾಗುವುದಂತು ಸತ್ಯ. ಮಿಕ್ಕೆಲ್ಲ ವಿಚಾರಗಳು ಮಿಥ್ಯ ಅಂದರೆ ಉಗ್ರರನ್ನು ಮಟ್ಟ ಹಾಕುವ, ರಕ್ಷಣಾ ವ್ಯವಸ್ಥೆಯನ್ನು ಬಿಗಿಗೊಳಿಸುವ, ನಮ್ಮ ದೇಶವನ್ನು ಶಾಂತಿನಾಡಾಗಿಸುವ ವಿಚಾರ.. ಇನ್ನೂ ಮುಂತಾದವು.
"ಇದನ್ನೆಲ್ಲ ಗಮನಿಸುತ್ತಾ ಹೋದರೆ ಸರಕಾರ ಭಯೋತ್ಪಾದನೆಯನ್ನು ನಿಯಂತ್ರಸುತ್ತದೇಯೋ? ಇಲ್ಲ ಭಯೋತ್ಪಾದನೆಯೇ ಸರಕಾರವನ್ನು ನಿಯಂತ್ರಸುತ್ತಿದೇಯೋ?" ಎನ್ನುವ ಅನುಮಾನ ನಮ್ಮನ್ನು ಕಾಡುವುದು ಸಹಜ. “ನಮ್ಮ ಸರಕಾರ ಎಚ್ಚೆತ್ತು ಕೊಳ್ಳುವುದಾದರೂ ಎಂದು? ನಮ್ಮ ರಕ್ಷಣಾ ವ್ಯವಸ್ಥೆ ಇಡಿ ವಿಶ್ವದಲೇ ಅಷ್ಟನೇ ಸ್ಥಾನದಲ್ಲಿ ಇದೇ, ಇಷ್ಟನೇ ಸ್ಥಾನದಲ್ಲಿ ಇದೇ ಎಂದು ಬಡಾಯಿ ಕೊಚ್ಚಿಕೊಳ್ಳುವ ಪ್ರವೃತ್ತಿಯನ್ನು ಬಿಟ್ಟು ಉಗ್ರರನ್ನು ತ್ವರಿತವಾಗಿ ಹೇಗೆ ಮಟ್ಟ ಹಾಕಬೇಕು” ಎನ್ನುವ ವಿಚಾರದ ಬಗ್ಗೆ ಸರಕಾರ ಗಮನ ಹರಿಸಬೇಕಾಗಿದೆ.
ಪ್ರತಿವರುಷವೂ ಬಜೆಟ್‌ನಲ್ಲಿ ಕೇಂದ್ರ ಸರಕಾರ ನಮ್ಮ ದೇಶದ ರಕ್ಷಣಾ ವ್ಯವಸ್ಥೆಗೆಂದೆ ಸುಮಾರು 40 ಸಾವಿರದಿಂದ 45 ಸಾವಿರ ಕೋಟಿಗಳವರೆಗೂ ಮೀಸಲು ಇಡುತ್ತದೆ. ಆದರೆ ರಕ್ಷಣಾ ಇಲಾಖೆಯಲ್ಲಿರುವ ಬಹುತೇಕ ಪೋಲಿಸ್‌ರ ಬಳಿಯಾಗಲಿ ಇಲ್ಲವೇ ಯೋಧರ ಬಳಿಯಾಗಲಿ ಇರುವುದು 303 ರೈಫಲ್‌ಗಳಂತೆ (ಸುಮಾರು ನಲವತ್ತು ವರುಷಗಳಿಂದ ನಮ್ಮೂರ ನಂಜುಂಡಜ್ಜನ ಬಳಿಯಲ್ಲೂ ಇರೊದು ಅದೇ ಮಾಡೆಲ್‌ನ ರೈಫಲ್!), ಗುಂಡು ನಿರೋಧಕ ಕವಚಗಳು ನೂರಕ್ಕೆ ಹತ್ತು ಇಲ್ಲವೇ ಇಪ್ಪತ್ತು ಜನರ ಇವೆಯಂತೆ. ಇದು ಎಂತಹ ವಿಪರ್ಯಾಸ ನೋಡಿ. ಅಲ್ಲದೇ ಕಠಿಣ ತರಬೇತಿ ಪಡೆದ ಬಹುತೇಕ ಕುಶಲಯೋಧರು (ಊದಾ: NSG Commands). ನಮ್ಮ ದೇಶದ ರಕ್ಷಣೆಯಲ್ಲಿ ಕಾರ್ಯನಿರ್ವಹಿಸದೆ ನಮ್ಮ ರಾಜಕಾರಣಿಗಳ ಕಾವಲುಗಾರನಾಗಿ ಕೆಲಸ ಮಾಡಬೇಕು. “ಮಳ್ಳರೂಪದ ಕಳ್ಳರ ರಕ್ಷಣೆಗೆ ಕಾವಲುಗಾರರಾಗಿ ನಮ್ಮ ಯೋಧರುಗಳು ಇರಬೇಕೇ??”
ಇಷ್ಟೆಲ್ಲಾ ಉಪಯೋಗ ಪಡೆದುಕೊಳ್ಳುವ ರಾಜಕಾರಣಿಗಳು ಬೊಕ್ಕಸದಿಂದ ಹಣವನ್ನು ನೆರವಿನ ರೂಪದಲ್ಲಿ ಕೊಡುವ ಬದಲು ತಮ್ಮ ಒಂದು ತಿಂಗಳ ವೇತನವನ್ನು (ಸಂಸತ್ ಸದಸ್ಯರು, ರಾಜ್ಯಗಳ ವಿಧಾನ ಸಭೆಯ ಸದಸ್ಯರುಗಳು) ನೆರವಿನ ರೂಪದಲ್ಲಿ ಕೊಡಲಿ. ಆಗ ಅದು ನಿಜವಾದ ನೆರವಿನ ಧನವೆಂದು ಅನಿಸಿಕೊಳ್ಳತ್ತದೆ.
ಇನ್ನೂ ಇಡಿ ದೇಶವೇ ಶೋಕಸಾಗರದಲ್ಲಿ ಮುಳುಗಿದ್ದ ಆ ದಿನದಂದು ನಮ್ಮ ದೇಶದ ಭಾವಿ ಪ್ರಧಾನಿಯೆಂದು ಬಿಂಬತವಾಗಿರುವ ರಾಹುಲ್‌ಗಾಂಧೀ ಗೆಳೆಯನ ಮದುವೆ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದನಂತೆ. ನೋಡಿ ದೇಶವನ್ನು ಆಳುವುದಕ್ಕೆ ಇಂತಹವರುಗಳನ್ನು ನಾವುಗಳು ಆಯ್ಕೆಮಾಡಿ ಕಳಿಸುತ್ತೇವೆ. ಇಷ್ಟೆಲ್ಲಾ ಮಾಡುವ ಅವರಿಗೆ, ನಮ್ಮ ಕೇಂದ್ರ ಸರಕಾರಕ್ಕೆ ಉಗ್ರರನ್ನು ಹತ್ತಿಕ್ಕಲು ಹೋರಾಡಿ ಪ್ರಾಣತೆತ್ತ ಯೋಧರ ಗೌರವರ್ಥವಾಗಿ ಒಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಬೇಕೆಂಬ ಒಂದು ಸಾಮಾನ್ಯ ಪರಿಜ್ಞಾನ ಇದ್ದಂತಿಲ್ಲ!
ಒಂದೆಡೆ ಉಗ್ರರು ನಮ್ಮ ದೇಶದ ಮಾನವನ್ನು, ಅಮಾಯಕ ಜನರ ಪ್ರಾಣವನ್ನು ಬಹಿರಂಗವಾಗಿ ಹರಾಜು ಹಾಕುತ್ತಿದ್ದರೆ, ಇನ್ನೊಂದೆಡೆ ಈ ನಮ್ಮ ರಾಜಕಾರಣಿಗಳು ಹಾಗೂ ಭ್ರಷ್ಟಸರಕಾರಿ ಅಧಿಕಾರಿಗಳು ಅಂತರಿಕವಾಗಿ ನಮ್ಮ ದೇಶವನ್ನು ಸುಲಿಗೆ ಮಾಡುತ್ತಿದ್ದಾರೆ.
“ಇಂತಹ ಒಂದು ದೇಶವನ್ನು ರಾಮರಾಜ್ಯವಾಗಿಸುವ ಕನಸನ್ನು ನಾನು ಕಂಡಿದ್ದೆನಾ?” ಎಂದು ಪರಲೋಕದಲ್ಲಿರುವ ಮಹಾತ್ಮ ಗಾಂಧೀಜಿಯವರ ಆತ್ಮ ಅಂದುಕೊಂಡೀತು ಜೋಕೆ!
ಕೊನೆಯದಾಗಿ.. ಭಾರತ ದೇಶದ ಪ್ರಜೆಗಳಾದ ನಾವುಗಳು ಸಹ ಕಲಿಯಬೇಕಿರುವುದು ಬಹಳಷ್ಟಿದೆ.
“ಕ್ರಿಕೆಟ್” ಎನ್ನುವ ಆಟಕ್ಕೆ ಕೊಡುವ ಮಹತ್ವವನ್ನು ನಾವುಗಳು ದೇಶವು ಶೋಚನೀಯ ಪರಿಸ್ಥಿತಿಯಲ್ಲಿರುವಾಗಲೂ ಕೊಡುವುದಿಲ್ಲ. ಅವರುಗಳು ಆಟದಲ್ಲಿ ಗೆಲ್ಲಲಿ ಎಂದು ಹೋಮ, ಪೂಜೆ, ಪುನಸ್ಕಾರ ಎಲ್ಲ ಮಾಡುತ್ತೇವೆ. ಕ್ರಿಕೆಟ್ ಆಟಗಾರರಿಂದ ದೇಶಕ್ಕೆ ಆಗಿರುವ, ಇಲ್ಲವೇ ನಮಗೆ ಆಗಿರುವ ಅನುಕೂಲಗಳೇನು? ಎಂದು ನಾವು ಯಾವತ್ತಾದರೂ ಯೋಚಿಸಿದ್ದೇವೆಯೇ? ಇದು ಒಂದು ಉದಾಹರಣೆಯಷ್ಟೇ, ಇಂತಹ ನೂರೆಂಟು ಉದಾಹರಣೆಗಳಿವೆ. ಹಾಗಂತ ಕ್ರಿಕೆಟ್ ಆಟಗಾರರನ್ನು ದೂಶಣೆ ಮಾಡುವ ಪ್ರಯತ್ನ ನಾ ಮಾಡುತ್ತಿಲ್ಲ. ಆದರೆ ನಮ್ಮ ಭಾರತದಲ್ಲಿ ಇರುವ ಪ್ರಸ್ತುತ ಚಿತ್ರಣವನ್ನು ಹೇಳಿರುವೆನು. ಅದನ್ನೆಲ್ಲಾ ಬಿಡಿಸಿ ಹೇಳುವ ಅಗತ್ಯವಿಲ್ಲ ಎಂದುಕೊಂಡಿರುತ್ತೇನೆ......

ನನ್ನ ಈ ಲೇಖನವೂ ಸಮಯೋಚಿತವಾಗಿಯೂ ಹಾಗೂ ತರ್ಕಬದ್ಧವಾಗಿಯೂ ಇರುವುದೆನ್ನುವ ಆಶಯದೊಂದಿಗೆ ಈ ಲೇಖನವನ್ನು ಮುಕ್ತಾಯಗೊಳಿಸುತ್ತಿದ್ದೇನೆ. .
ಜೈ ಭಾರತ ಮಾತೆ..
-ನಿಮ್ಮ ಸುನಿಲ್ ಮಲ್ಲೇನಹಳ್ಳಿ
5 ಕಾಮೆಂಟ್‌ಗಳು:
alla ri elladaku politicians kade beetu maadi torsoddu bittu, navella en madithivi namm desha rakshane alii antha swalpa yochisi..
1)mane kaali idiya agadre inde mundhe vicharsde rent ge kodu..
2) nan maga engineer illa doctor agbeku anthare majority jana..yaaru thamm makklanna military ge sersoke hoppala..
innu esto ide heltha hodre..
but overall article chenagide
ನಿಜ ಸ್ವಾಮಿ, ದೇಶದ ಚಿಂತೆ ಯಾರಿಗೆ ತಾನೆ ಇದೆ? ತಾವುಗಳು ಚೆನ್ನಾಗಿದ್ದರೆ ಸಾಕಷ್ಟೆ, ಸುನಿಲ್ ಅವರೇ ನಿಮ್ಮ ಮಾತನ್ನು ನೂರಕ್ಕೆ ನೂರರಷ್ಟು ಬೆಂಬಲಿಸುವ ನಾನು ಇನ್ನು ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ.2+2=? ಗೆ ಉತ್ತರವನ್ನು ಹೇಳಲು ಬಾರದ ಮಹನೀಯರೆಲ್ಲ ದೇಶದ ಚುಕ್ಕಾಣಿ ಹಿಡಿದರೆ ಹೀಗೆ ತಾನೇ? ಯೋಗ್ಯ ವಿದ್ಯಾಭ್ಯಾಸವಿಲ್ಲ, ನಡೆ ನುಡಿಯಂತೂ ಕೇಳಲೇಬೇಡಿ, ಇಂತವರಿಗೆ ಗದ್ದುಗೆ, ಕಾರು ಬಂಗಲೆ ಸಾಲದ್ದಕ್ಕೆ ಜಡ್ ಶ್ರೇಣಿಯ ಭದ್ರತೆ, ಭಾರತ ಮಾತೆಯ ದುರಾದ್ರಷ್ಟ್ವವಲ್ಲದೇ ಇನ್ನೇನೂ ಹೇಳಲಾಗದು,
ಇನ್ನು ಮುಂಬೈನ ಬಗ್ಗೆ ಹೇಳುವುದಾದರೆ, ಯಾವುದೇ ಆಧುನಿಕ ಶಸ್ತ್ರಾಸ್ತ್ರಗಳೆಲ್ಲದೇ ಯೋಗ್ಯ ಸಂಪರ್ಕ ಸಾಧನಗಳಿಲ್ಲದೇ ಉಗ್ರರ ವಿರುದ್ದ ಹೋರಾಡಿ ಗೆದ್ದ ನಮ್ಮ ರಕ್ಷಣಾ ಪಡೆಯನ್ನು ಅಭಿನಂದಿಸೋಣ, ಆದರೆ ಅದರಲ್ಲೂ ರಾಜಕೀಯ ಲಾಭವನ್ನು ಪಡೆಯಬಯಸುವ, ವೀರಮರಣವನ್ನು ಅಪ್ಪಿದವರ ಅಂತಿಮದರ್ಶನಕ್ಕೊ ತೆರಳದೇ, ಹೋದರೊ ಸಮಂಜಸವಾದ ಗೌರವವನ್ನು ಅರ್ಪಿಸದೇ ಇದ್ದರೂ ಮಾಧ್ಯಮಗಳೆದುರು ದೊಡ್ಡಸ್ತಿಕೆಯ ಮಾತನಾಡುವ ಮೂಲಕ ತಮ್ಮ ರಾಜಕೀಯದ ಬೇಳೆಯನ್ನು ಬೇಯಿಸಿಕೊಳ್ಳುವ ದೇಶೋದ್ದಾರಕರಿಗೆ ಏನೆನ್ನೋಣ? ಆಟದಲ್ಲಿ ಗುರಿಯನ್ನು ತಲುಪಿದ್ದಕ್ಕೆ ಅಭಿನವ್ ಬಿಂದ್ರಾ ಗೆ ಕೋಟಿ ಕೋಟಿ ಹಣ, ಪದಕ ಹಾರ ತುರಾಯಿ ಶಾಲು ಸನ್ಮಾನ, ಆದರೆ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದವರಿಗೆ ಏನೂ ಇಲ್ಲ!! ವೀರಮರಣವನ್ನು ಅಪ್ಪಿದವರಿಗೆ ನಾಲ್ಕಾರು ಲಕ್ಷಗಳ ಭರವಸೆ, (ಅದು ಕೊಡುವುದು ಎಂದೋ ಏನೋ ದೇವರಿಗೇ ಗೊತ್ತು) ಎಂತಹ ವಿಪರ್ಯಾಸ? ನನ್ನ ಪ್ರಕಾರ ಜನತೆ ಎಚ್ಚರಗೊಂಡು ಬ್ರಷ್ಟರು ಸ್ವಾರ್ಥಿಗಳು ರಾಜಕೀಯವನ್ನು ಪ್ರವೇಶಿಸದಂತೆ ತಡೆಯಬೇಕಷ್ಟೆ.
ಜನಜಾಗ್ರತಿಗಾಗಿ ಇಂತಹ ನಿಷ್ಟುರ ಲೇಖನವನ್ನು ಬರೆದ ನಿಮ್ಮನ್ನು ಅಭಿನಂದಿಸುತ್ತೆನೆ
ಇತಿ ತಮ್ಮ ವಿಶ್ವಾಸಿ ಅಶೋಕ
ಅನಾಮಧೇಯ ಹಾಗು ಅಶೋಕ ಅವರಿಗೇ,
ಅಭಿಪ್ರಾಯ ತಿಳಿಸಿದಕ್ಕೆ ವಂದನೆಗಳು. ಎಷ್ಟೇ ಆದ್ರೂನು..ಎಷ್ಟೇ ಬರೆದ್ರೂನು ನಮ್ಮ ದೇಶದ ಸ್ಥಿತಿ ಯಾರು ಬದಲಾಯಿಸದೊಷ್ಟು ಹದಗೆಟ್ಟಿದೆ.
-ನಿಮ್ಮ ಸುನಿಲ್ ಮಲ್ಲೇನಹಳ್ಳಿ
ರಾಜಕಾರಣಿಗಳನ್ನು ಬೆಟ್ಟು ಮಾಡಿ ತೋರಿಸುವುದಲ್ಲದೆ ಮತ್ತೇನು ಮಾಡಬೇಕು ಸ್ವಾಮಿ, ನಾವು ಅವರಿಗೆ ಓಟು ಹಾಕಿ ಗೆಲ್ಲಿಸುವುದು, ನಮ್ಮ ದೇಶವನ್ನು ಅವರ ಕೈಯಲ್ಲಿ ಇಟ್ಟಿರುವುದು ದೇಶವನ್ನು ಸುರಕ್ಷವಾಗಿ ನೋಡಿಕೊಳ್ಳಲು. ಅವರ ಸ್ವಾರ್ಥ ನೋಡಿಕೊಳ್ಳುತ್ತಿರುವವರನ್ನು ಬೈಯದೇ ಇನ್ನೇನು ಮಾಡಬೇಕು?
ನಿಜ ಕವಿತಾ ಅವರೇ ನಿಮ್ಮ ಮಾತನ್ನು ಅಕ್ಷರಶಃ ಸಮರ್ಥಿಸುವ ನಾನು ಇನ್ನೂ ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ. ನೋಡಿ ಬೆಂಗಳೂರಿನ ಒಂದು ವ್ಯಾಪಾರ ಮಳಿಗೆಯಿಂದ (ಬಿಗ್ ಬಜಾರ್,ಗೋಪಾಲನ್ ಮಾಲ್)ಹಣವನ್ನು ನೀಡದೇ ಒಂದು ಪುಟ್ಟ ವಸ್ತುವನ್ನು ಹೊರತರಲು ಆಗುವುದಿಲ್ಲ ಹೆಚ್ಚೆಂದರೆ ನಿರ್ಗಮನದ ಬಾಗಿಲಿನ ವರೆಗೆ ಬರಬಹುದಷ್ಟೆ, ಅಲ್ಲಿ ಅಳವಡಿಸಿರುವ ಕ್ಯಾಮರಾ ಹಾಗೂ ಭದ್ರತಾ ಸಿಬ್ಬಂದಿಯ ಹದ್ದಿನ ಕಣ್ಣನ್ನು ತಪ್ಪಿಸಿ ಹೊರಬರಲು ಸಾದ್ಯವೇ ಇಲ್ಲ.ಹೀಗಿರುವಾಗ 15 - 20 ಮಂದಿ ಭಯೋತ್ಪಾದಕರ ತಂಡ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಒಳನುಗ್ಗಿ ಅಷ್ಟೊಂದು ವ್ಯವಸ್ಥಿತ ರೀತಿಯಲ್ಲಿ ಆಕ್ರಮಣವನ್ನು ನಡೆಸಲು ಹೇಗೆ ತಾನೆ ಸಾದ್ಯವಾಯಿತು? ಇದರಲ್ಲಿ ಏನೋ ಸೋರಿಕೆ,ರಾಜಕೀಯ ನಾಯಕರ ಬ್ರಷ್ಟ ಪಾಲುಗಾರಿಕೆ ಹಾಗೂ ಸ್ಥಳೀಯ ದೇಶದ್ರೋಹಿಗಳ ಸಹಕಾರ ಇರುವುದು ಹಗಲು ಬೆಳಕಿನಷ್ಟು ಸ್ಪಷ್ಟ ಅಲ್ಲವೇ?
ಕಾಮೆಂಟ್ ಪೋಸ್ಟ್ ಮಾಡಿ