ಬುಧವಾರ, ಡಿಸೆಂಬರ್ 10, 2008

ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)


(ಮುಂಬಯಿ ನಗರಿಯಲ್ಲಿ ನವೆಂಬರ್ 26, 2008 ರಂದು ಉಗ್ರಗಾಮಿಗಳಿಂದ ನೆಡೆದ ದುಷ್ಕೃತ್ಯದಲ್ಲಿ ಅಸುನೀಗಿದ ನಮ್ಮ ವೀರಯೋಧರಿಗೆ, ಅಮಾಯಕ ನಾಗರೀಕರಿಗೆ ನಾ ಬರೆದ ಈ ಲೇಖನ ಹಾಗೂ ಕವನ ಹೃದಯಪೂರ್ವಕವಾಗಿ ಅರ್ಪಣೆ -ನಿಮ್ಮ ಸುನಿಲ್ ಮಲ್ಲೇನಹಳ್ಳಿ). ಒಮ್ಮೆ ಓದಲು ಮರೆಯದಿರಿ.
ಉಗ್ರನಿಗೆ ಎಳೆಯ ಬಾಲಕನ ಪ್ರಶ್ನೆ...(ಒಂದು ಕವನ)

ಓ ಭಯೋತ್ಪಾದಕನೇ..
ನಿಲ್ಲು ನಿಲ್ಲು ನನ್ನ ಕಂಡು
ಏಕೆ ನೀ ಕಂಗೆಟ್ಟು ಓಡುತ್ತಿರುವೇ? ನಿಲ್ಲು

ಓ ಭಯೋತ್ಪಾದಕ ನಾನಲ್ಲ ನಿನ್ನ ಪಾಲಿನ ಅಂತಕ
ನಾ ಭಾರತ ಮಾತೆಯ ಮಡಿಲ ಎಳೆಯ ಬಾಲಕ
ಅವಳ ಸೇವೆಯೇ ನನ್ನ ಪಾಲಿಗೆ ಒಲಿದಿರುವ ಕಾಯಕ

ನಾ ನಿನ್ನಲಿಗೆ ಬಂದಿರುವೆ ಕೇಳಲೆಂದು ನಿನಗೆ ಹಲವು ಪ್ರಶ್ನೆ
ಮಾಡದೆ ನನಗೆ ಹಿಂಸೆ ಬಗೆ ಹರಿಸುವೆಯಾ ನನ್ನಯ ಪ್ರಶ್ನೆ?

ಓ ಭಯೋತ್ಪಾದಕನೇ..
ಜಗದಲಿ ಅಮಾಯಕ ಜನರ ನೀ ಏಕೆ ಕೊಲ್ಲುವೇ?
ಇದಕ್ಕೆಲ್ಲ ನಿನಗೆ ಯಾರು ಅಂತಹ ಪ್ರೇರಣೆ?
ಪ್ರೇರಣೆ ಯಾರಾದರೇನು? ಜಗದಲಿ ನೆಡೆವ
ವಿದ್ವಂಸಕ ಕೃತ್ಯಗಳಿಗೆಲ್ಲ ನೀನ್ ತಾನೆ ನೇರ ಹೊಣೆ?


ಓ ಭಯೋತ್ಪಾದಕನೇ..
ಬುದ್ದಿ ಮಾತೊಂದು ನಾ ಹೇಳುವೆ ನೀ ಕೇಳು ಸುಮ್ಮನೆ
ಮನುಜನೇ ನೀ ಆದರೆ ಒಮ್ಮೆ ಮಾಡಿ ಸರಿ ಯೋಚನೆ
ಈ ಭಯೋತ್ಪಾದನೆಯ ಇಂದಿಗೆ ನೀ ಮಾಡು ಕೊನೆ
ಧರೆಯನು ಆಗಲು ಬಿಡು ಶಾಂತಿ ತುಂಬಿದ ಮನೆ

ಓ ಭಯೋತ್ಪಾದಕನೇ..
ನೀ ಕೇಳದೆ ಹೋದರೆ ನನ್ನ ಮಾತು..
ನಾ ಆದ ಮೇಲೆ ಯುವಕ ತೊಟ್ಟು ಶಾಂತಿ ದ್ಯೋತಕ
ಆಗಲಿರುವೆನು ಮಾನವೀಯತೆಯ ಪೊರೆವ ಸೇವಕ
ಕಣ್ಣಾರೆ ಕಂಡು ನೀ ಮಾಡುತ್ತಿರುವ ಹೀನ ಕಾಯಕ
ಆಗಲಿರುವೆನು ನಿನಗೆ ನೀತಿಪಾಠವ ಕಲಿಸುವ ಸೈನಿಕ
ಭೂವಿಯಲಿ ಎಲ್ಲೆಡೆ ಮಾಡಿ ಅಹಿಂಸೆಯ ಸಂಗ್ರಾಮ
ಭಯೋತ್ಪಾದನೆಗೆ ನಾ ಇರಿಸುವೆನು ಪೂರ್ಣವಿರಾಮ!

- ಸುನಿಲ್ ಮಲ್ಲೇನಹಳ್ಳಿ

7 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

sunil neev oodogbekri terorists nodi.. avru nimm nodi oodothilla... ahimse anno mathu gandhi kaalake hortoythu,, igenidru himse indane saadisbeku ellanu..
ahimse antha kuthre nammane kasayi kaanege marbidtare avru..

SurajGowda ಹೇಳಿದರು...

Namaskara Sunil,

Nimma chinthaneya yeleyu eega thaane jagathina bengaadinali molakeyodeyuthiruva supthamanasina bhaalakana manasinalli moodi maasihoguva ondhu yeleyannu bhimbhisidheeri .. nanna vandhanegalu idhake...

Ee chinthaneya haadhiyanu olladha manasinali poshakaru hosakihaakuthiruva ee khaaladhali ee haadhi sugamavaadhudhalla...

Aadharu nimma ee chinthanege nanna vandhane..

SurajGowda

Hubballiyava ಹೇಳಿದರು...

ಸುನಿಲ್ ರೇ
ಚನ್ನಾಗಿ ಬರೆದಿದ್ದೀರಾ. ನಿಮ್ಮ ಕವನವನ್ನು ಓದಿ ತುಂಬಾ ಖುಷಿ ಆಯಿತು. ಇಂದಿನ ದಿನಗಳಲಿ ಹೀಗೆ ವಿಚಾರ ಮಾಡುವದೇ ಕಮ್ಮಿ.
ಇಂತಿ
ಅನಿಲ ಕಾಳಗಿ

Sunil Mallenahalli ಹೇಳಿದರು...

ಸರು ಅವರೇ, ಸುರಜ್ ಅವರೇ, ಅನಿಲ್ ಅವರೇ..
ಅಭಿಪ್ರಾಯ ತಿಳಿಸಿದಕ್ಕೆ ವಂದನೆಗಳು. ಎಷ್ಟೇ ಆದ್ರೂನು..ಎಷ್ಟೇ ಬರೆದ್ರೂನು ನಮ್ಮ ದೇಶದ ಸ್ಥಿತಿ ಯಾರು ಬದಲಾಯಿಸದೊಷ್ಟು ಹದಗೆಟ್ಟಿದೆ.
ನಿಮ್ಮ ಸುನಿಲ್ ಮಲ್ಲೇನಹಳ್ಳಿ

Parisarapremi ಹೇಳಿದರು...

ದೇಶದ ಸ್ಥಿತಿ ಹದಗೆಟ್ಟಿರುವುದು ಎಷ್ಟು ಸತ್ಯವೋ ಅದನ್ನು ಸರಿ ಪಡಿಸಬಹುದೆಂಬುದೂ ಅಷ್ಟೇ ಸತ್ಯ. ಆದರೆ ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಷವೆಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ನಿಮ್ಮ ಕವನ ಉತ್ತಮವಾದ ಪ್ರಯತ್ನ. ಬರೆಯುತ್ತಿರಿ..

ಕವಿತ ಹೇಳಿದರು...

ಗಾಂಧಿವಾದವನ್ನು ನಾನು ವಿರೋಧಿಸುತ್ತೇನೆ.ಸರು ಅವರು ಹೇಳಿದಹಾಗೆ ಗಾಂಧಿಯ ಕಾಲ ಹೋಯಿತು.ಗಾಂಧಿಯೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣ. ದೇಶದ ವಿಭಾಜನೆ ಮಾಡಿ ಅವರು ಹೊರಟು ಹೋದ್ರು ನಾವು ಸಾಯ್ತಾ ಇದ್ದೇವೆ.
ಈಗ AK 47 ಬೇಕು. ನಮ್ಮ ಕೈಗಲ್ಲ ನಮ್ಮ ಪೋಲಿಸರ ಕೈಗೆ.ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಪೋಲೀಸರನ್ನು ಬಳಸಿಕೊಳ್ಳದೆ ಜನರ ಸೇವೆಗೆ ಬಳಸಲಿ.
ಜೈ ಹಿಂದ್

Unknown ಹೇಳಿದರು...

"Muslim is not a terrorist
Terrorist is not a Muslim".

Prapanchada yella dharmagaLu shanthiya paThavannu saaruttave.
Kela kidigeligalu haNadaasege namma vishvada shanthi keduttiddare.

Vandina pravadi Muhammad(s)tanna sangadigarondinge hoguttidaru. Taavu tangidda jagadalli kempu iruvegala dandu dandu gaLiddavu. Avara sahachararu adannu benki hacchidaru. Aaga pravadivaryaru bahaLa kopagondu..."Yaaru ee benki hacchidavaru, Devarannu bittare bereyavara praNa tegedu kolluva hakku yaarigu illavendu kathinavaagi teekisidaru.

Eruvegala pranakke bele kotta pravadivaryaru manushyna prana tegedu kollalu kalisuvare?

Bhayodpaka Muslim aagalu saadhyve illa.

Zabiulla Khan
Bangalore