ಮನದ ಸಂತೆಯಲ್ಲಿ ನಡೆದಿಹುದು ಕನ್ನಡ ಪದಗಳ ನಿನಾದ! ಈ ಬ್ಲಾಗಿನಲಿ ಪ್ರತಿಕ್ಷಣವೂ ಹರಿದಿಹುದು ಅ ನಿನಾದ ಸಂವಾದ! ಓದುಗರಿಗಂತೂ ದಿನನಿತ್ಯವೂ ಹೊಸ ವಿಚಾರದ ಆಸ್ವಾದ. ..
ಬುಧವಾರ, ಫೆಬ್ರವರಿ 11, 2009
ಪ್ರೀತಿ, ಪ್ರೇಮ ಅಂದರೆ ನನಗಿಷ್ಟು ಗೊತ್ತು..ನಿಮಗೆಷ್ಟು ಗೊತ್ತು??
ಪ್ರೀತಿ, ಪ್ರೇಮ ಅಂದರೆ ನನಗಿಷ್ಟು ಗೊತ್ತು..ನಿಮಗೆಷ್ಟು ಗೊತ್ತು??
"ಪ್ರೇಮಿಗಳ ದಿನದ" ಸುಸಂದರ್ಭದ ನಿಮಿತ್ತ ಎಲ್ಲರಿಗೂ ಒಪ್ಪಿಗೆ ಹಾಗೂ ಇಷ್ಟವಾಗುವಂತಹ ಒಂದು ಸರಳ, ಸುಂದರವಾದ ಲೇಖನವನ್ನು ಬರೆಯಬೇಕೆಂದು ಹಲವಾರು ಬಾರಿ ನಾನು ಮನದಲ್ಲೇ ಆಲೋಚಿಸಿದ್ದೆ. ಅದರಂತೆ ಪ್ರೀತಿ, ಪ್ರೇಮದ ಬಗ್ಗೆ ನನ್ನ ಮನದಾಳದ ಅನಿಸಿಕೆಗಳನ್ನು ತಿಳಿಸುವ ಸಲುವಾಗಿ ಒಂದು ಪರಿಪಕ್ವವೆನ್ನಿಸುವ ಲೇಖನವೊಂದನ್ನು ಬರೆದಿರುವೆನು. ದಯಮಾಡಿ ಬಿಡುವು ಇದ್ದಾಗ ಒಮ್ಮೆ ಓದಿರಿ..
ಮಿಂಚು, ಗುಡುಗು, ನ್ಯೂಕ್ಲಿಯರ್ ಪವರ್ ಗಳಿಗಿಂತಲೂ ಬಲಿಷ್ಟವಾದ "ಪ್ರೀತಿ ಹಾಗೂ ಪ್ರೇಮ"ಎನ್ನುವ ಎರಡು ಭಾವನಾತ್ಮಕ ಪದಗಳ ಬಗ್ಗೆ ಪ್ರೇಮಿಯಾಗದೆ ಬರೆಯುವ ಶಕ್ತಿ ನನಗೆ ಇರದಿದ್ದರೂ. ಅಲ್ಪ-ಸ್ವಲ್ಪ ಕವಿ ಚಿಂತನ ಮನೋಭಾವನ್ನು ನನ್ನಲಿ ಇಟ್ಟುಕೊಂಡಿರುವುದರಿಂದ, ಆ ಎರಡು ಭಾವನಾತ್ಮಕ ಪದಗಳ ಬಗ್ಗೆ ಬರೆಯುವ ಶಕ್ತಿ, ಸಾಮರ್ಥ್ಯ ನನ್ನಲಿ ಇದೆ ಎಂದು ಭಾವಿಸುತ್ತಾ. ಈ ಲೇಖನವನ್ನು ಬರೆದಿರುವೆನು.
“ಪ್ರೀತಿಯೆಂದರೇನು...?”
ಪ್ರೀತಿಯೆನ್ನುವುದು ಬಹುಮುಖ ಹಾಗೂ ಬಹುರೂಪವುಳ್ಳದ್ದು. ಅದರ ಬಾಹುಗಳ ವಿಸ್ತಾರ ಅಳತೆಗೆ ಮೀರಿದ್ದು, ಕಣ್ಣಿಗೆ ಕಾಣದ್ದು, ವಯಸ್ಸಿನ ಅಂಕೆಯಲ್ಲಿ ಒಳಪಡದ್ದು. ಸ್ವಾರ್ಥಕ್ಕೆ ಎಷ್ಟೂ ದೂರವಾದುದ್ದೋ ಅಷ್ಟೇ ಹತ್ತಿರವಾದುದ್ದು. ಇವರೆಗೂ ಎಷ್ಟೋ ಕವಿಗಳ, ಎಷ್ಟೋ ರಸಿಕರ ಕಾವ್ಯ ಕಾರಂಜಿಯ ಲಹರಿಯಲ್ಲಿ ಎಷ್ಟು ವಿಧವಾಗಿ ಬಣ್ಣಿಸಿದರೂ, ಎಷ್ಟು ವಿಧವಾಗಿ ವರ್ಣಿಸಿದರೂ ಮತ್ತೆ ಮತ್ತೆ ಎಲ್ಲೆಲ್ಲೋ, ಯಾರ್ಯಾರಿಂದಲೋ ಯಾರ್ಯಾರೋ ಮನದಲ್ಲೋ, ಕಲ್ಪನೆಯಲ್ಲೋ, ನರನಾಡಿಗಳ ಮಿಡಿತದಲ್ಲೋ ಚಿಗುರೊಡೆದು ಹೊಸ ಬಗೆಯ ರೂಪ, ಹೊಸ ಬಗೆಯ ಭಾವ, ಹೊಸ ಬಗೆಯ ಉತ್ಸಾಹ ಎಲ್ಲವನ್ನೂ ಪಡೆದು ಮತ್ತೆ ಮತ್ತೆ ವರ್ಣಿಸಲ್ ಪಡುವುದು, ಮತ್ತೆ ಮತ್ತೆ ಬಣ್ಣಿಸಲ್ ಪಡುವುದು... ಈ ಪ್ರೀತಿ!”
ಇದು ಕೇವಲ ಬರಿ ಹುಡುಗ-ಹುಡುಗಿ, ಗಂಡ-ಹೆಂಡತಿಗಳ ನಡುವೆ ಮಾತ್ರವೇ ವ್ಯಕ್ತವಾಗುವಂತಹದ್ದಲ್ಲ. ತಾಯಿ ತನ್ನ ಮಗುವಿನಲ್ಲಿ ಇರಿಸಿರುವ ಅನನ್ಯ ಮಮಕಾರ, ಅಕ್ಕರೆ ರೂಪದಲ್ಲೂ ಅಡಗಿರುತ್ತದೆ. ಬಂಧು-ಬಾಂಧವ್ಯ ರೂಪದಲ್ಲಿ ಇರುತ್ತದೆ, ಗೆಳೆತನದ ರೂಪದಲ್ಲೂ ಇರುತ್ತದೆ. ಆದರೆ ಇವುಗಳೆಲ್ಲವುಗಳಿಗಿಂತ ಸ್ವಲ್ಪ ವಿಭಿನ್ನವಾಗಿಯೂ, ಸ್ವಲ್ಪ ವಿಚಿತ್ರವಾಗಿಯೂ ಇರುವುದು ಹುಡುಗ-ಹುಡುಗಿ, ಗಂಡ-ಹೆಂಡತಿಯರ ನಡುವೆ ಇರುವ ಪ್ರೀತಿ! ಇವೊಂದು ಪ್ರೀತಿಯಲ್ಲಿ ವಯೋ ಸಹಜವಾದ ಆಕರ್ಷಣೆ ಇರುತ್ತದೆ, ನೂರಾರು ಹೊಂಗನಸುಗಳು ಇರುತ್ತವೆ, ಬರಿ ಇಷ್ಟೇ ಅಲ್ಲದೆ ಮನದ ಮೂಲೆಯಲ್ಲಿ ಎಲ್ಲೋ ಅದಮ್ಯ ಕಾಳಜಿ, ನವಿರು ರೋಮಾಂಚನ, ಮತ್ತೆಲ್ಲೋ ಒಂದು ಕಡೆಯಲ್ಲಿ ಸಮಾಜದ ಭೀತಿ, ಬೆಸುಗೆ ಕಳಚಿ ಬೀಳುವ ಭಯ ಹೀಗೆ ಎಲ್ಲವೂ ಸಂಮಿಶ್ರಣವಾಗಿರುತ್ತದೆ.
ಯುವಕ, ಯುವತಿಯರು ಪ್ರೀತಿ ಮಾಡಬಾರದೆಂದು ನಮ್ಮ ಸಂಪ್ರದಾಯ, ನಮ್ಮ ಧರ್ಮ ಎಂದೂ, ಯಾವತ್ತೂ ಹೇಳಿಲ್ಲ. ಇದಕ್ಕೆ ಪೂರಕವಾಗಿರುವಂತೆ ಆಗಿನ ಕಾಲದಲ್ಲೇ ನಳ ದಮಯಂತಿ ಪ್ರೀತಿ ಮಾಡಿರಲಿಲ್ಲವೇ? ರಾಧಾ ಕೃಷ್ಣರು ಪ್ರೀತಿ ಮಾಡಿರಲಿಲ್ಲವೇ? ಹೆತ್ತವರು, ಒಡಹುಟ್ಟಿದವರು, ಬಂಧು-ಬಾಂಧವರು ಹಾಗೂ ಗೆಳೆಯರು ಇವರೆಲ್ಲರ ಪ್ರೀತಿಯ ಜೊತೆಗೆ ನಮ್ಮನ್ನು, ನಮ್ಮಷ್ಟೇ ಅರ್ಥಮಾಡಿಕೊಂಡು ಪ್ರೀತಿ ಮಾಡುವ ಜೀವವಿದ್ದರೆನೇ ಈ ನಮ್ಮ ಬದುಕು ಒಂದು ಪರಿಪೂರ್ಣವಾದದ್ದು ಎಂದು ಹೇಳಿಕೊಳ್ಳಬಹುದು.
ಆದರೆ ನಾವು ಮಾಡುವ ಈ ಪ್ರೀತಿ, ಪ್ರೇಮ ಬರಿ ವಯೋ ಸಹಜವಾದ ಆಕರ್ಷಣೆಯಿಂದ ಬಂದಂತದ್ದು ಆಗಿರಬಾರದು. ಏಕೆಂದರೆ ಆ ರೀತಿ ಬಂದಂತದ್ದು ತಾತ್ಕಾಲಿಕವಾಗಿರುತ್ತದೆ. ನಮ್ಮ ಭವ್ಯ ಸಂಸ್ಕೃತಿ, ಪರಂಪರೆಗಳನ್ನು, ಕಟ್ಟುಪಾಡುಗಳನ್ನು ಮುರಿಯಲು ದಾರಿಯಾಗುತ್ತದೆ. ಅದ್ದರಿಂದ ನಮ್ಮ ಅಂತರಾಳದಲ್ಲಿ ಮೂಡಿ ಬಂದ ಪ್ರೀತಿ, ಪ್ರೇಮ, ಆಕರ್ಷಣೆ ಶಾಶ್ವತವಾಗಿರಬೇಕು, ನಂಬಿಕೆಯುತವಾಗಿರಬೇಕು ಮತ್ತು ಎಲ್ಲರೂ ಒಪ್ಪಿ ಮೆಚ್ಚುವಂತಿರಬೇಕು
ನಮಗೆ ಇಷ್ಟವಾದವರ ಪ್ರೀತಿಯನ್ನು ಹೇಗೆ ಒಲಿಸಿಕೊಳ್ಳುವುದು??
ಕೆಲವರಿಗೆ ಪ್ರೀತಿಯ ವಿಚಾರವೊಂದೇ ಅಲ್ಲ ಮಿಕ್ಕೆಲ್ಲ ವಿಚಾರದ ಬಗ್ಗೆಯೂ ಸಹ ತಮ್ಮ ಮನದಾಳದಲ್ಲಿ ಹೊಮ್ಮಿಬಂದ ಹೊಸ ಬಯಕೆಯನ್ನ, ಹೊಸ ಭಾವನೆಯನ್ನ, ನವಿರು ಪುಳಕವನ್ನ ಹಾಗೆ ಬರಲು ಕಾರಣರಾದವರ ಮುಂದೆ ಸುಂದರವಾಗಿ ಹೇಳಿ ಅವರ ಪ್ರೀತಿಯನ್ನ, ಅವರ ಒಲವನ್ನ, ಅವರ ಪ್ರೇಮವನ್ನ, ಕೊನೆಗೆ ಅವರ ಬಾಂಧವ್ಯವನ್ನೂ ಸಹ ಪಡೆದುಕೊಳ್ಳುವ ಕಲೆ ಇರುತ್ತದೆ (ಸಿದ್ದಿಸಿರುತ್ತದೆ). ಹೌದು ಇದು ಅದ್ಬುತವಾದ ಒಂದು ಕಲೆ. ಪ್ರೀತಿ ಮಾಡುವ ಅವಕಾಶ, ಸೌಭಾಗ್ಯ, ಎಲ್ಲರಿಗೂ ಒಲಿದು ಬರುವುದಿಲ್ಲ.
ಆದರೆ ಪಾಪ ಇನ್ನು ಕೆಲವರಿಗೆ ತಮ್ಮ ಮನದಲ್ಲಿ ಮೂಡಿಬಂದ ಅಪರಿಮಿತ ಮಧುರ ಭಾವ, ಹೊಚ್ಚ ಹೊಸ Feelingsಗಳನ್ನು, ಆಸೆ, ಆಕಾಂಕ್ಷೆಗಳನ್ನು ಹೇಳುವ ಧೈರ್ಯ ಬಾರದೆ ತಮ್ಮ ಮನದಲ್ಲೇ ಇಟ್ಟುಕೊಂಡು ಕೊರಗುತ್ತಾರೆ. ತಮ್ಮೊಳಗೇನೆ ಆ ಮಧುರ ಭಾವವನ್ನು ಹೆಮ್ಮರವಾಗಿಸಿ ಬಿಡುತ್ತಾರೆ.
ನೆನಪಿರಲಿ, ಎಲ್ಲೂ ಹೇಳಲಾರದೆ ಮನದ ತಿಜೋರಿಯ, ಮಧುರ ಭಾವಗಳ ಖಾನೆಯೊಳಗೆ ಬಚ್ಚಿಟ್ಟುಕೊಂಡ ಪ್ರೀತಿಯು ನಿಜಕ್ಕೂ ಬಹಳ ಪ್ರಬಲವಾದುದ್ದು, ಅದರ ಜೊತೆಗೆ ಅಷ್ಟೇ ನೋವನ್ನು ಯಾತನೆಯನ್ನು ತರುವಂತಹದ್ದು...ಮತೆ ಹಾಗೆ ಇರದೆ ನಮ್ಮ ಪ್ರೀತಿಯನ್ನು ಹೇಗೆ ವ್ಯಕ್ತ ಪಡಿಸುವುದು? ಪ್ರೇಮಿಗಳ ದಿನದೊಂದು ಅದ್ದೂರಿಯಾಗಿ ಮಾಡುವ ಆಚರಣೆ ತರವೇ?? ಎಲ್ಲವನ್ನು ಮುಂದಿನ ಲೇಖನದಲ್ಲಿ ಚರ್ಚಿಸೋಣ!!
ಒಂದು ಸರಳವಾದ ಕವನವನ್ನೂ ಕೆಳಗೆ ಬರೆದಿರುವೆನು ಒಮ್ಮೆ ಓದಿರಿ
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಆ ಹಾಲು ಬೆಳದಿಂಗಳ ಚಂದಿರ│ ಅವನಿದ್ದರೂ ಅಷ್ಟು ಸುಂದರ│
ನಿನ್ನಯ ಚೆಲುವಿನಲಿ ಒಂದಿಷ್ಟು ಪಾಲು│ ಪಡೆಯಲು ತೋರಿಹನಂತೆ ಕಾತರ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಹೊನ್ನಕಾಂತಿ ತುಂಬಿಕೊಂಡ ಆ ನೇಸರ│
ಕಂಡು ನಿನ್ನ ಕಣ್ಣಕಾಂತಿ ತಾಳಿಹನಂತೆ ಬೇಸರ│
ನಿನ್ನ ಭೇಟಿಗೊಮ್ಮೆ ತೋರಿಹನಂತೆ ಬಲು ಆತುರ?
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ನಿನ್ನ ಮುದ್ದುನಗು│ ಕಂಡ ಮುಗ್ದ ಮಗು│
ಮಾಡಿವುದಂತೆ ಹಠ│ ನಿನ್ನ ಜೊತೆಯಲಿ ಆಡಬೇಕೆಂದು ಆಟ!
ಇದು ನಿಜವೇನೇ? ಗೆಳತಿ, ಇದು ನಿಜವೇನೇ?
ಇರಲಿ ಇರಲಿ ಗೆಳತಿ, ಹೀಗೆ ಇರಲಿ ಇರಲಿ
ನಿನ್ನ ಚಲುವಿನಲಿ ಕಾಂತಿ│ ನಿನ್ನ ನಯನದಲೂ ಕಾಂತಿ│
ನಿನ್ನ ನಗುವಿನಲಿ ಸ್ಫೂರ್ತಿ│ ನಿನ್ನ ಬದುಕಲಿ ಕೀರ್ತಿ│
ಆದರೆ ನಿನ್ನಲಿ ನಾ ಇಟ್ಟಿರುವ ಪ್ರೀತಿ│ ಎಂದೂ ಆಗದಿರಲಿ ಒಂದು ಭ್ರಾಂತಿ!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
24 ಕಾಮೆಂಟ್ಗಳು:
ಸುನಿಲ್ ಅವರೆ,
ನಿಮ್ಮ ಲೇಖನ ಹಾಗು ಕವನ ಚೆನ್ನಾಗಿದೆ.
ಪ್ರೀತಿ ಕೇವಲ ಹುಡುಗ - ಹುಡುಗಿದೆ ಮಾತ್ರ ಸೀಮಿತವಲ್ಲ. ನಮಗೆ ಸಂಬಂಧಗಳಲ್ಲದೇ ನಿರ್ಜೀವ ವಸ್ತುಗಳ ಮೇಲೂ ಪ್ರೀತಿ ಇರುತ್ತದೆ. ಬೈಕ್, ಕಾರು, Etc...
ಪ್ರೀತಿಯೆಂದರೇನು? ಬಹುಶ: ಅರ್ಥವಾದರೂ ಅರ್ಥೈಸಲಾಗದ ಪದವೆಂದರೆ ಇದೇ ಇರಬೇಕು. ದೇವರು ಎನ್ನುವ ಪದಕ್ಕೊಂದು ಹೇಗೆ ನಿರ್ದಿಷ್ಟ ರೂಪ ಕೊಡಲು ಸಾಧ್ಯವಿಲ್ಲವೋ, ಅಂತೆಯೇ ಪ್ರೀತಿ ಎಂಬ ಪದಕ್ಕೂ. ದೇವರಿಗೆ ನಿತ್ಯ ಪೂಜೆ ಮಾಡಿದರೂ, ವರ್ಷಕ್ಕೊಂದು ಹಬ್ಬ ಮಾಡುವುದಿಲ್ಲವೇ, ಹಾಗೆಯೇ ಪ್ರೀತಿ ನಿತ್ಯ ನೂತನವಾದರೂ, ವರ್ಷಕ್ಕೊಮ್ಮೆ ಅದಕ್ಕೂ ಹಬ್ಬ!!! ಆದರೆ ಅರ್ಥವಿಲ್ಲದ, ಭಾವವಿಲ್ಲದ ಕೇವಲ ಆಚರಣೆಗಳು, ಡಂಭಾಚಾರಗಳಾಗುತ್ತವೆ, ಸಿನಿಕತೆಯೆನಿಸಿಕೊಳ್ಳುತ್ತವೆಯಷ್ಟೆ.
ಕೊನೆಯಲ್ಲಿ ಕವನ ರೂಪದಲ್ಲಿ ಮೂಡಿರುವ ನಿಮ್ಮ ಪ್ರೀತಿಯ ನಿವೇದನೆ ಮನ:ಸ್ಪರ್ಶಿಯಾಗಿದೆ.
ಪ್ರೇಮಿಗಳ ದಿನಾಚರಣೆಯ ಬಗ್ಗೆ ನನಗೇನೂ ಅನಿಸದಿದ್ದರೂ, ಪ್ರೇಮದ ಬಗ್ಗೆ ನೀವು ಬರೆದಿರುವುದು ತುಂಬಾ ಚೆನ್ನಾಗಿದೆ. ಹಾಗೇ ಕವನವೂ.
ಲೇಖನ ಚೆನ್ನಾಗಿದೆ. ಅದಕ್ಕಿಂತಲೂ ಕೊನೆಯ ಕವನ ತುಂಬಾ ಇಷ್ಟವಾಯಿತು. ಬರೆಯುತ್ತಿರಿ ಹೀಗೇ.
ಚೆನ್ನಾಗಿ ಮೂಡಿ ಬಂದಿದೆ
ಲೇಕನ ಪ್ರೀತಿ ಪ್ರೇಮದ ಅಳವನ್ನು ಮತ್ತೊಮ್ಮೆ ಎಚ್ಚರಿಸುವಂತೆ ಇದೆ
ಧನ್ಯವಾದಗಳು
ಕುಮಾರ್
tumba valle abhipraya kottidiri Sunil!
preeti andre bari ondu dinada(Feb 14) aacharane alla adu dinanityada anubhava... adu kuda bari yavvanada huduga,hudugiya madhya iru va bhavane ashte alla. ivellavanna aritare maatra preeti anno padakke paripoorna artha sikkantagutte :)
chennagide, mundavrsi... all d best :)
lekhana chennagide, koneya kavanavooo
Namaskara... chennagi barediddiri...
Nanage tilida haage, preeti andre basically avashykate.. namage avashyakate iruva vastu/vyaktigala mele maatra preeti huttutte.
Prema andre, just a byproduct of physical need.
anyway, ondu olleya baraha barediddiri.
ಸರ್ವಂ ಪ್ರೇಮಮಯಂ! ಪ್ರೇಮಿಗಳ ದಿನದ ಪ್ರಭಾವವಿರಬಹುದೆ.!
Sunil,
wonderful writing, pleasure to read.
Keep going
ಪ್ರಿಯ ಸುನಿಲ್ ನಿನ್ನ ಲೇಖನ ಇಷ್ಟವಾಯ್ತು ಆದರೆ ಸುನಿಲ್ ನಮ್ಮ ಲೇಖನವನ್ನು ನಾವೇ ಪರಿಪಕ್ವವೆಂದರೆ ಹೇಗೆ, ಅದನ್ನ ಬೇರೆಯವರು ಹೇಳಬೇಕು ಗೆಳೆಯ
ಪ್ರೇಮದ ಬಗೆಗೆ ಚೆನ್ನಾಗಿ ಬರೆದಿದ್ದೀರಿ
ಅಭಿನಂದನೆಗಳು
Namaste Sunil
Nijavagalu nimma ee lekhana "PREETHI hagu PREMA" dha bage barediruvudu tumba adhbuthavagidhe. Preeti mathu Prema endare enu yendu bhala artha garbithavagi helidhira, kavanagale sogasaagidhe.
Shubhavaagali....
Jai Karnataka
preethiya bagge chennagi barediddira adarallu kavana tumba chennagide
ಜಯ ಅವರೇ..ವಿನುತಕ್ಕ ಅವರೇ..ಮಲ್ಲಿಕಾರ್ಜುನ ಸರ್ ಅವರೇ..ತೇಜಸ್ವಿನಿ ಅಕ್ಕ ಅವರೇ..ಪ್ರತಿಕ್ರಿಯಿಸಿದ್ದಕ್ಕೆ ಹೃದಯ ಪೂರ್ವಕ ವಂದನೆಗಳು..
ಸುನಿಲ್
ಬಾಲು ಅವರೇ..ಹುಸೇನ್ ಅವರೇ..ಪ್ರಶಾಂತ್ ಅವರೇ..ಸತ್ಯನಾರಾಯಣ ಸರ್ ..ಗುರುಮೂರ್ತಿ ಸರ್ , ಪ್ರಕಾಶ್ ಅವರೇ, ಸೂರಿ ಸರ್ , ರೋಹಿಣಿ ಅವರೇ ಪ್ರತಿಕ್ರಿಯಿಸಿದ್ದಕ್ಕೆ ಹೃದಯ ಪೂರ್ವಕ ವಂದನೆಗಳು..
ಸುನಿಲ್
ಸುನಿಲ್,
ಕವನಗಳು ಇಷ್ಟವಾಯಿತು... ಹೀಗೆ ಮುಂದುವರೆಯಲಿ...
Preetiya Sunil...
preetiya bagegina abhiprayagalu chennagive...nishkalmasha haagu amara preetiyannu vyaktapadisalu ondu pratyeka dinada agathyavilla endu tumba chennagi heliddiri...
tumba dhanyavadagalu...
ಸುನಿಲ್,
ನಿಮ್ಮ ಲೇಖನ ಮತ್ತು ಕವನ ಎರಡು ತುಂಬಾ ಚೆನ್ನಾಗಿವೆ..
ಪ್ರೇಮಿಗಳ ದಿನಾಚರಣೆ ದಿನಕ್ಕೆ ಪ್ರೀತಿಯ ಬಗ್ಗೆ ಒಂದು ಒಳ್ಳೆ ಲೇಖನ....
ಪ್ರೀತಿಯ ವ್ಯಕ್ತಪಡಿಸಲು ಇಂಥ ದಿನಗಳೇ ಆಗಬೇಕು ಅಂತ ಏನಿಲ್ಲ...ಯಾವಾಗ ಬೇಕಾದರೂ ತುಂಬು ಪ್ರೀತಿಯಿಂದ ವ್ಯಕ್ತಪಡಿಸಬಹುದು....
ಅಭಿನಂದನೆಗಳು...
Namastae Sunil ,
Neevu bareyuva ellla lekhanagalu nanange acchu mecchhuu.
nimmalli ondu adbhuta kale ideendare adu nimma baravanige . ellakkinta hecchagi baraha ellu kuda stimitta kaledukolladiruvudu.
nimma barahagallalli bahala vishaygalu hagu sandeshagalu tumbiruttave ...
nimma ee baravanige hege saagali ....
nimmma ellla hudukatagalige nijjakkku uttara siguttade haagu neevu huduko elllavu ade roopadallli doreyali endu saada haraidsuva nimma putta gelati
pavii....
preetiya vyakta tumbaa sogasaagide, blog premigala hridaya tattuvantide...
super
nijawagalu yenthamathu si i fan of u sir thumba thumbane chennagive sir nimma blogge commets sir
nanna hosa preetige nimma kavana spoirti sir..
ಕಾಮೆಂಟ್ ಪೋಸ್ಟ್ ಮಾಡಿ